Wednesday, 15 November 2017

ವಂದೇ ಶಂಭು ಉಮಾಪತಿಮ್ ಸುರಗುರುಮ್
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಮ್ ಮೃಗಧರಮ್
ವಂದೇ ಪಶುನಾಮ್ ಪತಿಮ್
ವಂದೇ ಸೂರ್ಯ ಶಶಂಕ್ ವನ್ನಿ ನಯನಮ್
ವಂದೇ ಮುಕುಂದಪ್ರಿಯಮ್
ವಂದೇ ಭಕ್ತ ಜನಾಶ್ರಯನ್ಚ ವರದಮ್
ವಂದೇ ಶಿವಮ್ ಶಂಕರಮ್

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮಪಾಲಾ ದಯಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಅನ್ನಪ್ಪ ಗುರುವೆ ನಿನ್ನಗೆ ಶರಣು ಏನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದ ಬೇಡುವೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೆ ಗೆಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

No comments:

Post a Comment