ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಹೂವು ನಕ್ಕಾಗಾ ತಾನೆ ಅಂದ ಇರುವುದು
ದುಂಬಿ ಬರುವುದು
ಚಂದ್ರ ನಕ್ಕಾಗಾ ತಾನೆ ಬೆಳಕು ಬರುವುದು
ಕಡಲು ಕುಣಿವುದು
ಸೂರ್ಯನಾಡೊ ಜಾರೊ ಆಟ ಬಾನು ನಗಲಂತೆ
ಬಿಸೊ ಗಾಳಿ ತುಗೊ ಪೈರು ಭೂಮಿ ನಗಲಂತೆ
ದೇವರು ತಂದ ಸೃಷ್ಟಿಯ ಎಲ್ಲರೂ ನಗಲಂತೆ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಆಕಾಶಾದ ಆಚೆ ಎಲೋ ದೇವರ ಇಲ್ಲವೊ
ಹುಡುಕ ಭೇಡವೊ
ಆ ಮಾಯಾಗಾರ ತಾನು ಗಿರಿಯಲಿಲ್ಲವೊ
ಗುಡಿಯಲಿಲ್ಲವೊ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವುನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
No comments:
Post a Comment