Wednesday, 15 November 2017

ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೆ ನಿನ್ನೊಡಲ್ಲಲಿ ನಾನಾಡುವೆನು
ಬಾ ಪ್ರೇಮಿಯೆ  ನಿನ್ನೆದೆಯಲ್ಲಿ ನಾ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯಾ
ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವಾ ಓ ಸಿಂಗಾರಿ
ಚಳಿಗಾಲ ಬಂದಾಗ ಮುಸುಕೆಳೆವಾ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯಾ

ಯಾರೇ ನೀನು  ಸುಂದರ ಚೆಲುವೆ ಒಬ್ಬಾಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ವಾರೆವಾ ಈ ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ ಮಾಡಿದಿವಿ
ಎಲ್ಲಾನೂ ನೋಡದಿವಿ

ಇಲ್ಲಮ್ಮ ತಾಯಿ ಮುಚ್ಚೋ ಬಾಯಿ
ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು
ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರಾ
ಕಾಡಾಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರಾ
ಇಂಪಾಗಿ ಹಾಡ್ತಿಯಾಂತ ಹೇಳೋಕೆ ನಾ ಹೋದೆ
ಯಾಕೇಂತ ಗೋತಿಲ್ಲಾ ಮಾತಿಲ್ಲದಂತೆ ನಾನಾದೆ
ಹೀಗೆಕೆ ನಾನಾದೆ ನೀನ್ನಾಣೆ ನನಗೇನೋ ಇದು ಹೊಸದು


ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

No comments:

Post a Comment