Tuesday, 31 October 2017

ಚಿತ್ರ: ಗಂಧದ ಗುಡಿ
ಹಾಡಿದವರು: ಪಿ ಬಿ ಶ್ರೀನಿವಾಸ್ 
ನಟರು: ರಾಜ್ ಕುಮಾರ್, ವಿಷ್ಣು ವರ್ಧನ್, ಕಲ್ಪನಾ 

ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ 
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ 

ನಾವಾಡುವ ನುಡಿಯೇ ಕನ್ನಡ ನುಡಿ 
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚಂದದ ಗುಡಿ ಶ್ರೀಗಂಧದ ಗುಡಿ...ಅಹಹ ಅಹಹ ಅಹಹ.....

ಹಸಿರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ 
ಚೆಲುವಿನ ಬಲೆಯ ಬೀಸಿದಳೋ ಈ ಗಂಧದ ಗುಡಿಯಲಿ ನೆಲೆಸಿಹಳೋ
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ....ಅಹಹಹ ಓ.....

ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸೋ ಆಸೆಯಲಿ ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ.....ಅಹಹಹ ಓ..... 
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ

ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೇಚದ ಉಕ್ಕಿನ ಕೋಟೆ
ಮಾಡಿಸಿದ ಕರಿಯ ಮಾಡವಾಡಗಿಸಿದ
ಮಾದಕರಿನಾಯಕರ್ ಆಳಿದಾಕೊಟೆ
ಪುಣ್ಯ ಭೂಮಿಯು ಈನಾಡು ಸಿದ್ಧರು ಹಾರಿಸಿದ ಸಿರಿನಾಡು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ವೀರ ಮದಕರಿ ಆಲುಟಲಿರಲು
ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಗೂಢಚಾರರುಳೆದು ಬಂದರು
ಹೈದರಾಳಿಗೆವಿಶಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೇಡೆ ನೋಡು ಎಂದರು
ಕಳ್ಳ ಗಾಂದಿಯ ತೋರಿದರೂ ಲಗ್ಗೆ ಹತ್ತಲು ಹೇಳಿದರು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸುತ್ತಮುತ್ತಲೂ ಕಪ್ಪು ಕಟಲ್ಲೆಯೂ ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು ಅವನ ಸತಿ ಬಂದಿರಲು
ಕಲ್ಲಗಂದಿಯ ಹಿಂದೆ ಪಿಸ್ಸುಮಾತು ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪದೇ ಕೊಟ್ತೆಯುತ್ತಾ ಬರುವುದನು ಕಂಡಳು

ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲೂ
ದುರ್ಗಿಯನ್ನು ಮನದಲ್ಲೇ ನೆನೆದಳು
ಕಾಳಿಯಂತೆ ಬಳಿಗಾಗಿ ಕಾದಲು ಯಾರವಳು? … ಯಾರವಳು?
ವೀರವನಿತೆ ಆ ಓಬವ್ವ ದುರ್ಗವು ಮರೆಯದ ಓಬವ್ವ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ತೆವಲುತ ಒಳಗೆ ಬರುತಿರೆ ವೈರಿ
ಒನಕೆ ಬೀಸಿ ಕೊಂಡಳು ನಾರಿ

ಸಾತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯೂಟ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡೀ ಹರಿಸಿದಳು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣಕಾಂಡಿ ಅವತಾರವನು ಕೋಟಿ ಸಲಹಿದ ತಾಯಿಯನು

ರಣ ಕಹಳೆ ಊಡುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಶೈಶವಾಗಲು
ಕಾಳಗದಲ್ಲಿ ಜಯವನು ತ
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ.. ವಿಧಿ ಅಲೆದಡಿಸುವ ಬಂಡಿ..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..

ಕಾಶೀಲಿ ಸ್ನಾನ ಮಾಡು.. ಕಾಶ್ಮೀರ ಸುತ್ತಿ ನೋಡು..
ಜೋಗದ ಗುಂಡಿ ಒಡೆಯ ನಾನೆಂದೂ ಕೂಗಿ ಹಾಡು..
ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು..
ಬಾದಾಮಿ ಐಹೊಳೆಯ ಚಂದಾ ನಾ ತೂಕ ಮಾಡು..
ಕಲಿಯೋಕೆ ಕೋಟಿ ಬಾಷೆ ಆಡೋಕೆ ಒಂದೇ ಬಾಷೆ..
ಕನ್ನಡ ಕನ್ನಡ ಕಸ್ತೂರಿ ಕನ್ನಡಾ….
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಾತಕ ಬಂಡಿ.. ವಿಧಿ ಗುರಿ ತೋರಿಸುವ ಬಂಡಿ..

ದ್ಯಾನಕ್ಕೆ ಭೂಮಿ ಇದು.. ಪ್ರೇಮಕ್ಕೆ ಸ್ವರ್ಗ ಇದು..
ಸ್ನೇಹಕ್ಕೆ ಶಾಲೆ ಇದು.. ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು.. ಶಿಲ್ಪಕ್ಕೆ ಕಲ್ಪ ಇದು..
ನಾಟ್ಯಕ್ಕೆ ನಾಡಿ ಇದು.. ನಾದಾಂತರಂಗವಿದು..
ಕುವೆಂಪು ಬೇಂದ್ರೆ ಇಂದ.. ಕಾರಂತ ಮಾಸ್ತಿ ಇಂದ..
ಧನ್ಯವೀ ಕನ್ನಡ.. ಕಾಗಿನ ಕನ್ನಡಾ..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ.. ವಿಧಿ ಧದ ಸೇರಿಸುವ ಬಂಡಿ..

ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ..
ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..
ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು..
ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು..
ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ..
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ…
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ.. ಇದು ವಿಧಿಯೋಡಿಸುವ ಬಂಡಿ..
ಚಿತ್ರ: ಸೋಲಿಲ್ಲದ ಸರದಾರ
(೧೯೯೨/1992)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ.

ಕನ್ನಡ, ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ, ಈ
ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಹಾಡಾಗಲಿ ಗೂಡಾಗಲಿ
ನಾಡಾಗಲಿ
ಕಟ್ಟೋಕೆ ನಾನಾದಿನ,
ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು,
ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ ಈ
ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು,
ಕರಗಿದವು ಶಿಲೆಗಳು
ತುಂಬಿದರು ಎದೆಯಲಿ
ಸಿರಿಗನ್ನಡ ಅಭಿಮಾನವ
ಕನ್ನಡ, ರೋಮಾಂಚನವೀ ಕನ್ನಡ
ಹಾಡಿಸು, ಕೇಳಿಸು,
ಪ್ರೀತಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ಜ್ಞಾನ ಇದೆ, ಚಿನ್ನ ಇದೆ,
ಕಾವೇರಿ ಇದೆ
ಬಡತನವೆ ಮೇಲಾಗಿದೆ,
ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ,
ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ,
ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ,
ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ,
ಅರಿರಾಯರ ತೋಳ್ಬಲಗಳು
ಏಳಿರಿ, ಏಳಿರಿ, ಈ
ಪ್ರಾರ್ಥನೆಯ ಕೇಳಿರಿ
ಕಲಿಯಿರಿ, ದುಡಿಯಿರಿ,
ಉಳಿಸಿರಿ

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ
ತಾಯ್ನಾಡು
ಮಹೋನ್ನತ ಕಲೆಗಳ
ನೆಲೆವೀಡು
ಕೆಡಿಸದಿರು ಈ ಹೆಸರ, ಈ
ಹೆಸರ
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಹಾಡು: ಬಾರಿಸು ಕನ್ನಡ ಡಿಂಡಿಮವ
ರಚನೆ: ಕುವೆಂಪು
ಗಾಯನ: ಶಿವಮೊಗ್ಗ ಸುಬ್ಬಣ್ಣ

ಬಾರಿಸು ಕನ್ನಡ ಡಿಂಡಿಮವ 
ಓ ಕರ್ನಾಟಕ ಹೃದಯ ಶಿವ 
ಬಾರಿಸು ಕನ್ನಡ ಡಿಂಡಿಮವ 

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ ||

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ ||
ಚಿತ್ರ: ತಿರುಗು ಬಾಣ
ರಚನೆ: ಅರ. ಏನ್. ಜಯಗೋಪಾಲ್ (?)
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ - ೨
ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,
ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು
ಚಾಮುಂಡಿ ರಕ್ಷೆಯು ನಮಗೆ, ಗೊಮಟೆಷ ಕಾವಲು ಇಲ್ಲಿ,
ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,
ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ,
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೆರೆಯ ಮೊದಲ ಸಾಹಿತಿ
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ
ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ
ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ
ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಚಿತ್ರಕಥೆ ಬರೆದ ಪುಟ್ಟಣ್ಣನವರು
ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ

ನಂಜುಂಡಿ ಕಲ್ಯಾಣದ ಉದಯಶಂಕರರು
ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು
ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೆ ಶ್ರೀಗಂಧ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೆ ಶ್ರೀಗಂಧ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಕಾಡು ಮಲ್ಲಯ್ಯಂಗೆ ಜೇನುಕಿಟ್ತು ಪೂಜೆ ಕೊಟ್ಟು
ಜಾಜಿ ಮ್ಯಾಲ್ ತಂದು ದೇವಮ್ಮಂಗೆ ಮಾಲೆಈತ್ತು
ಏಳು ಹಡ್ಡಿ ಇಂದ ಏಳು ರಾತ್ರಿ ಏಳು ಹಗಲು
ಏಳು ಕಣ್ಯೆರಿಂಗ್ ಸೋಬಲಕ್ಕಿ ದೇವಿಗಿದಳು
ಚಿಗುರೊಡೆಯಿತು ಬೆಳಕರಳಿತು ಹೊಳೆ ಹರಿಸಿತು ರಸಾತನ
ಮನೆಮನೆಯಲು ಜನಮನದಲು ಶಿವನೊಲವಿನ ಶುಭ ಧ್ಯಾನ
ಕನ್ನಡ ನೆಲವೇ ಧಾನ್ಯ ಕನ್ನಡ ಜಾಲವೇ ಮಾನ್ಯ
ಕನ್ನಡ ನೆಲವೇ ಧಾನ್ಯ ಕನ್ನಡ ಜಾಲವೇ ಮಾನ್ಯ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲ
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲ
ನಮ್ಮ ಧರ್ಮದಲ್ಲಿ ಬೇಧ ಭಾವ ಕಾಣೋದಿಲ್ಲ
ನಮ್ಮ ನೀತಿಯಲ್ಲಿ ಕಾಡೇ ಇಲ್ದೆ ನಾಡೆ ಇಲ್ಲ
ಗಿಡಮರಗಳೇ ತರುಲತೆಗಳೆ ನದಿವಾನಗಳೇ ವರದಾನ
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸಗಾನ
ಕನ್ನಡ ಜನರೇ ಚಂದಾ ಕನ್ನಡ ಮನವೇ ಅಂದ
ಕನ್ನಡ ಜನರೇ ಚಂದಾ ಕನ್ನಡ ಮನವೇ ಅಂದ

ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ರಾಯರು ಬಂದರು ಮಾವನ ಮನೆಗೆ ಸಾಂಗ್ಸ್

ಬಾರೆ ಬಾರೆ ದೇವಿಯೇ
ಅಡವಿ ದೇವಿಯ
ಮುದ್ದಿನ ಹುಡುಗಿ
ಅಪರಾಧಿ ನಾನಲ್ಲ

Saturday, 28 October 2017

ಮೂವೀ: ಕಿಚ್ಚ ಹುಚ್ಚ (2010)
ಮ್ಯೂಸಿಕ್: ವೀ ಹರಿಕೃಷ್ಣ
ಲಿರಿಕ್ಸ್: ಯೋಗ್ರಜ್ ಭಟ್
ಸಿಂಗರ್ಸ್: ಸೋನು ನಿಗಮ, ಅನುರಾಧ



ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ಅತಿಯಾದ ಒಳಾವಳಿ.. ಮಿತಿಯಾ ಮೀರಿಬಿಡಲೆ..
ತುಸು ಇತಿ ಮಿತಿ ಜೊತೆ
ಇದೆ ತರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ನುಸೀದಳೆ ಹೊಸ ಮಾತಿನ ಪದನಿಸ

ವಿರಸ ಸರಸ ಎರಡು ಇದೆ ನನ್ನಲ್ಲಿ..
ನಗೆಯ ನಡುವೆ ಹನಿಯೊಂಧಿಧೆ ಕಣ್ಣಲ್ಲಿ..
ಅನುಭಾರಿಸುವ ಸಂಜೆಯಲಿ.. ರಮಿಸು ನಿನ್ನ ತೋಳಿನಲಿ..
ಒಂಧು ಮುತ್ತು ನೀಡಧೇನೆ.. ತೋರು ಪ್ರೀತಿ ಬೇರೆ ರೀತಿ
ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ

ವಿರಹ ಎನುವ ಪಧವೆ ನನಗಿಣ್ನಿಲ್ಲ..
ಸನಿಹ ಇರುವ ಕೆಲಸ ನನಗಿಣ್ನೆಲ್ಲ..
ಇದುವರೆಗಿನ ಏಕಾಂತ.. ಇಳಿಸಿರುವೆನು ಎದೆಯಿಂಧ..
ತೂಕ ಹಾಕಿ.. ನೋಡು ನೀನೇ.. ನನ್ನ ಪ್ರೀತಿ ತುಂಬಾ ಜಾಸ್ತಿ..
ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ಅತಿಯಾದ ಒಳಾವಳಿ.. ಮಿತಿಯಾ ಮೀರಿಬಿಡಲೆ..
ತುಸು ಇತಿ ಮಿತಿ ಜೊತೆ
ಇದೆ ತರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ
ನುಸೀದಳೆ ಹೊಸ ಮಾತಿನ ಪದನಿಸ

Thursday, 26 October 2017

ಮೂವೀ: ರಾಮ
ಸಿಂಗರ್: ಸೋನು ನಿಗಮ, ನಂದಿತಾ
ಲಿರಿಕ್ಸ್: ವೀ ನಾಗೇಂದ್ರ ಪ್ರಸಾದ್
ಮ್ಯೂಸಿಕ್: ವೀ ಹರಿಕೃಷ್ಣ



ನೀನೆಂದರೆ ನನಗೆ ಇಷ್ಟ ಕಣೋ.. ನಿನ್ನಿಂದಲೇ ಪ್ರೀತಿ ಚೆಂದ ಕಣೋ..
ಅಮರ ಮಧುರ ಮಧುರ ಅಮರ ಅನುರಾಗ..
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ.. ನೀನೆಂದರೆ ನನಗೂ ಅಷ್ಟೇ ಕಾಣೆ...

ಜೊತೆಗೆ ಜೊತೆಗೆ ನಡೆದು ಬೆರಳನು ಬೆಸೆಯುವ ತವಕ..
ಹೃದಯ ಹೃದಯ ಮಿಡಿದು ಹೊಸ ಬಗೆ ಅನುಭವ ಪುಳಕ..
ಮನಸೇ ಇರದ ನಿದಿರೆ ಏಕೆ.. ನೀನೇ ಇರದ ಬದುಕಿನ್ನೇಕೆ..
ಎಷ್ಟೋ ಒಲವ ಗುಣಿಸಿದ ಮೇಲೂ.. ನಮ್ಮ ಒಲವೆ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ.. ನೀನಿಲ್ಲದೆ ಏನು ಇಲ್ಲ ಕಾಣೆ..

ಪ್ರಣಯ ಜನಿಸೋ ಸಮಯ.. ಮನಸಿಗೂ ಮನಸಿಗೂ ಮಿಲನ..
ಕೊನೆಯವರೆಗೂ ನೀಲದ.. ಸಿಹಿಯಿದು ಒಲವಿನ ಕವನ..
ಪುನಹ ಪುನಹ ಬಯಸಿ ಸನಿಹ..
ತರಹ ತರಹ ಹೊಸದಿ ವಿರಹ..
ಇಷ್ಟ ಆಗೋ ಅರಳು ಮರಳು.. ಇನ್ನೂ ಬೇಕು ಅನಿಸೋ ಅಮಲು..
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ..
ಹೇ ಹೇ... ನಿನ್ನಿಂದಲೇ ಬದುಕು ಚೆಂದ ಕಾಣೆ..

ಅಮರ ಮಧುರ ಮಧುರ ಅಮರ ಅನುರಾಗ..
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗ...
ನೀನೆಂದರೆ ನನಗೆ ಇಷ್ಟ ಕಣೋ..
ಹೊ ಹೊ.. ನೀನೆಂದರೆ ನನಗೂ ಅಷ್ಟೇ ಕಾಣೆ...

Tuesday, 24 October 2017

ಚಿತ್ರ : ಡ್ರಾಮಾ
ಗಾಯಕ : ಸೋನು ನಿಗಮ್
ಸಾಹಿತ್ಯ & ನಿರ್ದೇಶಕರು : ಯೋಗರಾಜ್ ಭಟ್

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ
ಕಿಡಿಗೇಡಿ ಕನಸೊಂದಾ ಕಟ್ಟಿಡಲಾ
ಇದುಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾಡಿನೊಡ ನಿನ್ನನ್ನು ಸ್ಮೈಲ್ ಆದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದಾ
ನೀ ಮುಡಿದ ಸಂಪಿಗೆಯಾ ಸ್ಮೆಲ್ ಆದ್ರೂ ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ
ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ
ಚೆಂದುಟಿಯ ಪಕ್ಕದಲಿ...

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ ನಾನಾದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚಳಿಗಾಲ ಕಾಯೋದು ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟ್ ಹೊಚ್ಚರ್ಲಾ
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಬಿಗಿದಿಟ್ಟ ತಂಬೂರಿ ತಂತಿ ಎಂತಾಗಿರುವೆ
ತುಂಡು ಮಾಡೆನ್ನನು ಸೌಂಡಾದ್ರು ಬರಲಿ
ನಿನ್ನ ತಲೆ ದಿಂಬಿನ ಚಿತ್ರವಾಗಿರುವೆ
ನನ್ನ ಕನವರಿಕೆಯಲಿ ಒಂದಾದ್ರು ಸಿಗಲಿ
ಸಿಗದಂತ ಕೊನೆ ಸಾಲು ಬಿಟ್ಟಿರ್ಲಾ..
ಯಾವದಕ್ಕು ಕೊನೆಗೊಂದು ಡಾಟ್ ಇಡ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ

ಚೆಂದುಟಿಯ ಪಕ್ಕದಲಿ ತುಂಬಾ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡಲಾ..
ಒಂದೊಳ್ಳೆ ಬೈಗುಳವಾ ನಿ ನುಡಿಯುವಹಾಗೆ ಅತಿ ತುಂಟ
ಮಾತೊಂದಾ ನಾನಾಡ್ಲಾ
ಮಳೆ ನಿಂತು ಹೋದ ಮೇಲೆ
ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ
ದನಿಯೊಂದು ಕಾದಿದೆ
ಹೇಳುವುದು ಏನು ಉಳಿದು ಹೋಗಿದೆ
 ಹೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ
ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾದಿದೆ
ನೋವಿನಲ್ಲಿ ಜೀವ ಜೀವ ಅರಿತ ನಂತರ ನಲಿವು ಬೇರೆ ಏನಿದೆ ಏಕೆ ಅಂತರ ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ ಒಂದೇ ಸಾರಿ ನೀ ಕೆಳೆಯ ಎ ಸ್ವರ ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾದಿದೆ
 ಕಣ್ಣು ತೆರೆದು ಕಾಣುವ ಕನಸೇ ಜೇವನ
 ಸಣ್ಣ ಹಟವ ಮಾಡಿದೆ ಹೃದಯ ಎ ದಿನ
ಎದೆಯ ದೂರವಾಣಿಯ ಕರೆಯ
 ರಿಂಗಣ ಕೇಳು ಜೀವವೇ ಏತಕೀ
ಕಂಪನ ಹೃದಯವು ಇಲ್ಲೆ ಕಳೆದು ಹೋಗಿದೆ
 ಹುಡುಕಲೇ ಬೇಕೇ ತಿಳಿಯದಾಗಿದೆ
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾದಿದೆ ಹೇಳುವುದು ಏನು ಉಳಿದು ಹೋಗಿದೆ ಹೇಳಲಿ ಹೇಗೆ ತಿಳಿಯದಾಗಿದೆ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ
 ಚಂದ್ರ ಮೇಲೆ ಬಂದ,
ಮಿನುಗು ತಾರೆ ಅಂದ, ನೋಡು ಎಂಥ ಚೆಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ ,ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೇ ನೀ ನನ್ನ ಪ್ರಾಣದಂತೆ ,ನನ್ನ ಪ್ರಾಣದಂತೆ

ಆ ದೇವ ನಮಗಾಗಿ ತಂದ ಸಿರಿಯೇ
ಈ ಮನೆಯ ಸೌಭಗ್ಯ ನಿನ್ನಾ ನಗೆಯೇ
ಅಳಲೇನು ಚೆಂದ ನನ್ನ ಪುಟ್ಟ ದೊರೆಯೇ
ಹಾಯಾಗಿ ಮಲಗು ಜಾಣ ಮರಿಯೆ, ನನ್ನ  ಜಾಣ ಮರಿಯೆ

Saturday, 21 October 2017

ಕರಿಯಾ
ಮಾತಾಡು ಸಾಕು ಮಾನ ಬಿಸಾಕು |
ಮಾತಾಡು ಸಾಕು ಮಾನ ಬಿಸಾಕು |
ಹೋರಾಡುವಾ ದಮ್ಮಿದೆ | ಹುಡುಕಾಡುವಾ ದಿಲ್ಲಿದೆ || ಮಾತಾಡು ||
ತಲೆ ಮೇಲೆ ನೂರು ತಲೆ ಬೀಳಲಿ |
ಭೂಮಿನೇ ಚೂರು ಚೂರಾಗಲಿ |
ಪ್ರೀತಿಲಿ ನಾನು ನರರಾಕ್ಷಸ |
ನರನಾಡಿಯಲ್ಲ ನಿನಗೆ ವಶ |
ಯಾಕೆ ಹೀಗೆ ಚಿಟ್ಟೆ ಹಾಗೆ ಮರೆಯಾಗಿ ಹೋದೆ |
ಈ ಲವ್ ಯೂ ಸ್ವೀಟ್ ಹಾರ್ಟ್ | ಈ ಲವ್ ಯೂ || ಮಾತಾಡು ||
ಮಚ್ಚಳ್ಳಿ ಮನಸ್ಸು ಹೊಡದಕಿದೆ |
ಹುಚ್ಚಾಗಿ ನಾನು ಅಲೆದಾಡಿದೆ |
ನೀನೊಂದು ಮಾಯಾ ಮುತ್ತು ಕಾಣೆ |
ಹಿಡಿಯೋದು ನನಗೆ ಗೊತ್ತು ಕಾಣೆ |
ಯಾಕೆ ಹೀಗೆ ಚಿಟ್ಟೆ ಹಾಗೆ ಮರೆಯಾಗಿ ಹೋದೆ |
ಈ ಲವ್ ಯೂ ಸ್ವೀಟ್ ಹಾರ್ಟ್ | ಈ ಲವ್ ಯೂ || ಮಾತಾಡು ||
ಕರಿಯಾ

ಹ್ಱುದಯದಾ ಒಳಗೆ ಹ್ಱುದಯವಿದೆ |
ಅವನಾಲಿ ಅವಳಾ ಹ್ಱುದಯವಿದೆ |
ಹ್ಱುದಯವು ಕಾವ್ಯ ಬರೆಯುತಿದೆ |
ಕಾವ್ಯದ ಒಳಗೆ ಹ್ಱುದಯವಿದೆ |
ಯಾವುದು ಈ ಹೃದಯಾ ಓ . . .
ಯಾವುದು ಈ ಹ್ಱುದಯಾ. . . .||

ಒಮ್ಮೆ ನೋದೆ ಮತ್ತೆ ತಿರುಗಿ ನೋಡೋ ಹಾಗೆ ಮಾಡಿದೆ |

ಗೊತ್ತೆಯಾಗದಂತೆ ನೀನು ಮತ್ತೆ ತಿರುಗಿ ನೋಡಿದೆ |

ಮಾತೆ ಮೌನವಾಗಿದೆ | ಏನೋ ಬಂದ ಹಾಗಿದೆ |

ಒಳಗೊಳಗೇ ಚಡಪಡಿಸಿ ಒಲವನು ನೀಡೋ ಸೂಚನೆ |
ಹುಡಗರಿಗೆ ಹುಡಗಿಯರಾ ಕನಸಿಗೆ ಹೋಗುವ ಯೋಚನೆ ||ಹ್ಱುದಯದ||

ಕಣ್ಣಾ ಮೇಲೆ ಲಜ್ಜೆ  ಬಂದು  ಕೆಂಪಾಗೋತು ಕಾಡಿಗೆ |

ಹೆಣ್ಣಾ ಕಾಲ ಗೆಜ್ಜೆ ಇಂದು ಮಾನ ಆಯ್ತು ಏತಕೆ |

ಯಾರೋ ಬಂದ ಹಾಗಿದೆ | ಏನೋ ಅಂದ ಹಾಗಿದೆ |

ಎದೆಯೊಳಗೆ ಸಿಹಿ ಕವನ | ಹಾರಾಯುವ ಹಾಡಿದು ಯಾವುದು
ಕನಸೊಳಗೆ ತಂದನಂದನಾ ನುಡಿಸೋ ಹಾಡು ಯಾರದು ||ಹ್ಱುದಯದ||

Wednesday, 18 October 2017

ಚಿತ್ರ : ಕರಿಯ 2

ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
ಬೇಕು ಒಂದು ಜೀವ ಮಾತಿಗೆ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
ಅನುರಾಗದಲ್ಲಿ ಹೊಳೆವ ಅವತಾರ ನೂತನ
ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
ಕಣ್ಣ ಹನಿಯು ಮಾತ್ರ ನನ್ನದು
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
ನಾ ದೂರದಲಿ ನಿಂತು ಒಲವೇ ಏನು ಉಪಯೋಗ
ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ


ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.

ಕರಿಯ 2 ಚಿತ್ರದ ಹಾಡುಗಳ ಸಾಹಿತ್ಯ


ಅನುಮಾನವೇ ಇಲ್ಲ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಮಾನವೇ ಇಲ್ಲ ಅನುರಾಗಿ ನಾನೀಗ
ಬದಲಾಗಿದೆ ಈಗ ನಿನ್ನಿಂದಲೇ ಈ ಜಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.
ಚೂರು ನಿನಗಲು ಹೊಸ ಬಣ್ಣಾನೆ ಬಾನಿಗೆ
ಪಾದ ಊರಿದರೆ ಅದು ಚಿತ್ತಾರ ಭೂಮಿಗೆ
ಎದುರಿರೆ ನೀನು ಎದೆಯೊಳಗೆ ತುಸು ನಸು ನಾಚಿಕೆ
ಅರಳಿದೆ ಜೀವ ಒಳಗೊಳಗೇ ಪಿಸು ಪಿಸು ಮಾತಿಗೆ
ನಿನ್ನ ಪ್ರೀತಿಗಾಗಿ ಇನ್ನು ನಾನು ನೂರು ನೂರು ಸಾರಿ ಸಾಯುವೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.
ಕೊಂಚ ಕೊಂದುಬಿಡು ನಿನ್ನ ಕಣ್ಣಲ್ಲೇ ನನ್ನನ್ನು
ಬಾಚಿ ತಬ್ಬಿ ಬಿಡು ನಾ ಇನ್ನೇನು ಕೇಳೇನು
ಹಗಲಲೂ ನಿಂದೆ ಕನವರಿಕೆ ಮರುಳನ ಜೀವಕೆ
ನೆರಳಿಗೂ ಕೂಡ ಚಡಪಡಿಕೆ ಇನಿಯಳ ಸಂಘಕೆ
ಬೇರೆ ಯಾವ ದೇವರಿಲ್ಲ ಇನ್ನು ನೀನೇ ನೀನೇ ನನ್ನ ದೇವತೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.