Friday, 13 October 2017

ಬರೆದೆ ನೀನು ನಿನ್ನ ಹೆಸರ 
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ


ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ ||೨||
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲಿ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ

ಕಂಗಳಲ್ಲೇ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ ||೨||
ಅಂಗಳದೇ ಅರಳಿತಾಗ 
ನನ್ನ ಒಲವ ಮಲ್ಲಿಗೆ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ

ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ  ||೨||
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ
||ಬರೆದೆ ನೀನು||

No comments:

Post a Comment