Wednesday, 18 October 2017

ಕರಿಯ 2 ಚಿತ್ರದ ಹಾಡುಗಳ ಸಾಹಿತ್ಯ


ಅನುಮಾನವೇ ಇಲ್ಲ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಮಾನವೇ ಇಲ್ಲ ಅನುರಾಗಿ ನಾನೀಗ
ಬದಲಾಗಿದೆ ಈಗ ನಿನ್ನಿಂದಲೇ ಈ ಜಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.
ಚೂರು ನಿನಗಲು ಹೊಸ ಬಣ್ಣಾನೆ ಬಾನಿಗೆ
ಪಾದ ಊರಿದರೆ ಅದು ಚಿತ್ತಾರ ಭೂಮಿಗೆ
ಎದುರಿರೆ ನೀನು ಎದೆಯೊಳಗೆ ತುಸು ನಸು ನಾಚಿಕೆ
ಅರಳಿದೆ ಜೀವ ಒಳಗೊಳಗೇ ಪಿಸು ಪಿಸು ಮಾತಿಗೆ
ನಿನ್ನ ಪ್ರೀತಿಗಾಗಿ ಇನ್ನು ನಾನು ನೂರು ನೂರು ಸಾರಿ ಸಾಯುವೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.
ಕೊಂಚ ಕೊಂದುಬಿಡು ನಿನ್ನ ಕಣ್ಣಲ್ಲೇ ನನ್ನನ್ನು
ಬಾಚಿ ತಬ್ಬಿ ಬಿಡು ನಾ ಇನ್ನೇನು ಕೇಳೇನು
ಹಗಲಲೂ ನಿಂದೆ ಕನವರಿಕೆ ಮರುಳನ ಜೀವಕೆ
ನೆರಳಿಗೂ ಕೂಡ ಚಡಪಡಿಕೆ ಇನಿಯಳ ಸಂಘಕೆ
ಬೇರೆ ಯಾವ ದೇವರಿಲ್ಲ ಇನ್ನು ನೀನೇ ನೀನೇ ನನ್ನ ದೇವತೆ
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ
ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು
ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು
ಅನುಮಾನವೇ ಇಲ್ಲ ಅಭಿಮಾನಿ ನಾನೀಗ
ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.

No comments:

Post a Comment