Sunday, 1 October 2017

ಚಿತ್ರ: ಪ್ರೇಮದ ಕಾಣಿಕೆ
ಹಾಡಿದವರು: ರಾಜಕುಮಾರ್, ವಾಣಿ ಜಯರಾಂ
ನಟರು: ರಾಜಕುಮಾರ್, ಆರತಿ

ನಾ ಬಿಡಲಾರೆ ಎಂದು ನಿನ್ನ 
ನೀನಾದೆ ನನ್ನೀ ಪ್ರಾಣ 
ದೂರಾಗಿ ಹೋದರೆ ನೀನು
ನಾನೆಂದೂ ಬಾಳೆನು 
ಓ... ನಾ ಸೂರ್ಯಕಾಂತಿಯಂತೆ 
ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ 
ನೀನೆ ನನ್ನ ಜೀವ ನಾಡಿ 

ನಾನೇ ರಾಗ ನೀನೆ ಭಾವ ಎಂದೆಂದೂ 
ನಾನೇ ದೇಹ ನೀನೆ ಪ್ರಾಣ ಇನ್ನೆಂದು 
ನಾನೇ ಕಣ್ಣು ನೀನೆ ನೋಟ ಎಂದೆಂದೂ 
ನಾನೇ ಜ್ಯೋತಿ ನೀನೆ ಕಾಂತಿ ಇನ್ನೆಂದು 
ಬಾಳೆಂಬ ದೋಣಿಯೇರಿ ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ 

ಆಹಾ ಮೈ ಮಾಟವು ಈ ಸವಿ ನೋಟವು 
ಜೀವ ಕವಲಾಗಿ ಮೈ ತುಂಬೋ ಈ ಅಂದವು 
ಬಂತು ಇಂಥ ಅಂದ ಚಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೋ ಕಂದ ಜನ್ಮ 
ಇನ್ನು ನೀ ತಂದ ಸುಖಕ್ಕಿಂತ ಬೇರೆ ಭಾಗ್ಯ ಕಾಣೆ ನಲ್ಲ 

No comments:

Post a Comment