Tuesday, 31 October 2017

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೆರೆಯ ಮೊದಲ ಸಾಹಿತಿ
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ
ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ
ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ
ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಚಿತ್ರಕಥೆ ಬರೆದ ಪುಟ್ಟಣ್ಣನವರು
ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ

ನಂಜುಂಡಿ ಕಲ್ಯಾಣದ ಉದಯಶಂಕರರು
ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು
ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಭಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

No comments:

Post a Comment