Tuesday, 12 September 2017

ಮನೆ ದೇವ್ರು,
ಅಪರಂಜೀ ಚಿನ್ನವ ಚಿನ್ನವ
ನನ್ನಾ ಮನೆಯ ದೇವರು
ಗುಲಗಂಜಿ ದೋಷವೋ ದೋಷವೋ
ಇರದ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೆ
ಕರಗೊ ಚಂದ್ರನು ಅವ್ನ್ಯಾಕೆ ಹೋಲಿಕೆ
ಅಪರಂಜಿ ಚಿನ್ನವ ಚಿನ್ನವ
ನನ್ನ ಮನೆಯ ದೇವತೆ
ಗುಲಗಂಜಿ ದೋಷವೋ ದೋಷವೋ
ಇರದ ಬಾಲ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ
ಶಿಲೆಯ ಬಾಳಿಕೆ ಅವಳ್ಯಾಕೆ ಹೋಲಿಕೆ
ಅಪರಂಜೀ ಚಿನ್ನವ ಚಿನ್ನವ
ನನ್ನಾ ಮನೆಯ ದೇವರು
ಮನದಲ್ಲಿ ನಲಿದಾಡೋ ನಾಯಕ
ನೆಂದಂತೆ ತಾಹಾಡೊ ಗಾಯಕ
ಕಣ್ಣಲ್ಲೇ ಮಾತಾಡೊ ನಾಯಕಿ
ನಿಜ ಹೇಳಿ ನನ್ನಾಳೋ ಪಾಲಕಿ
ನಡೆಯಲ್ಲೂ ನುಡಿಯಲ್ಲೂ ಒಂದೇ ವಿಧವಾದ ಹೋಲಿಕೆ
ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ
ಅಪರಂಜಿ ಚಿನ್ನವ ಚಿನ್ನವ
ನನ್ನ ಮನೆಯ ದೇವತೆ
ಗುಲಗಂಜಿ ದೋಷವೋ ದೋಷವೋ
ಇರದ ಬಾಲ ಸ್ನೇಹಿತೆ
ಬಾಡೊ ಮಲ್ಲಿಗೆ ಹೂವ್ಯಾಕೆ
ಶಿಲೆಯ ಬಾಳಿಕೆ ಅವಳ್ಯಾಕೆ ಹೋಲಿಕೆ
ಅಪರಂಜೀ ಚಿನ್ನವ ಚಿನ್ನವ
ನನ್ನಾ ಮನೆಯ ದೇವರು
ಸುಖವಾದ ಸಂಸಾರ ನಮ್ಮದು
ನಮ್ಮಲ್ಲಿ ಅನುಮಾನ ಸುಳಿಯದು
ಪ್ರತಿ ರಾತ್ರಿ ಆರಂಭ ವಿರಸವೆ
ವಿರಸಕ್ಕೆ ಕೊನೆಯೆಂದು ಸರಸವೇ
ಕೋಪಕ್ಕೆ ತಾಪಕ್ಕೆ ಎಣ್ಣೆ ಎರೆಯೋಲ್ಲ ಇಬ್ಬರು
ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು
ಅಪರಂಜೀ ಚಿನ್ನವ ಚಿನ್ನವ
ನನ್ನಾ ಮನೆಯ ದೇವರು
ಗುಲಗಂಜಿ ದೋಷವೋ ದೋಷವೋ
ಇರದ ಸುಗುಣ ಶೀಲರು
ಉರಿಯೋ ಸೂರ್ಯನು ಅವನ್ಯಾಕೆ
ಕರಗೊ ಚಂದ್ರನು ಅವ್ನ್ಯಾಕೆ ಹೋಲಿಕೆ
ಅಪರಂಜಿ ಚಿನ್ನವ ಚಿನ್ನವ
ನನ್ನ ಮನೆಯ ದೇವತೆ

1 comment: