Tuesday, 12 September 2017

ಸಂಗ್ರಹಣೆ:- ರಘುವರ್ಧನ್ 

ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ
ನೀ ಇರದೆ ನಾ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಗಗನಂದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಾಲಿ ಹಾಡು ಎಲೆ ಮೇಲೆ
ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಊರ ತುಂಬಾ ಇದೆಯೋ
ನಿನ್ನ ಹೆಸರ ಗಾಳಿ ಒಂದೇ
ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಚೆಲುವನೆ ನಿನ್ನ ಮುಗುಳು ನಗೆ
ಹಾಗಳಲಿ ಶಶಿಯೂ ಬೇಡುವನು
ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೇ
ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ
ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾಧಾರಿ ಈ ಪ್ರೇಮವೇ
ನನ್ನ ಎದೆ ಆಳೋ ಡಾನೀ ನೀನೇ
ನಿನ್ನ ಸಹಚಾರಿಣಿ ನಾನೇ
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ
ನೀ ಇರದೆ ನಾ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು

No comments:

Post a Comment